ಕಮಲ ಬಸದಿಯು ಕರ್ನಾಟಕದ ಬೆಳಗಾವಿ ನಗರದ ಬೆಳಗಾವಿ ಕೋಟೆಯ ಒಳಗಿರುವ ಜೈನ ದೇವಾಲಯವಾಗಿದೆ . == ಇತಿಹಾಸ == ಕಮಲ್ ಬಸದಿಯು ಬಿಚ್ಚಿರಾಜ ಅಥವಾ ಬಿಚಲನಿಂದ ನಿರ್ಮಿಸಲ್ಪಟ್ಟಿತು. ರಟ್ಟ ರಾಜವಂಶದ ನಾಲ್ಕನೇ ಕಾರ್ತವೀರ್ಯನ ಆಸ್ಥಾನದಲ್ಲಿದ್ದ ಅಧಿಕಾರಿ ಬಿಚನನು ಜೈನ ಸನ್ಯಾಸಿ ಸುಭಚಂದ್ರಭಟ್ಟಾರಕದೇವರ ಮಾರ್ಗದರ್ಶನದಲ್ಲಿ. ಕ್ರಿ.ಶ ೧೨೦೪ರಲ್ಲಿಕಟ್ಟಿಸಿದನು.ವಾಸ್ತುಶಿಲ್ಪಿ ಕಾರ್ತವೀರ್ಯದೇವ ಮತ್ತು ಯುವರಾಜಕುಮಾರ ಮಲ್ಲಿಕಾರ್ಜುನದೇವ ನಿರ್ಮಿಸಿದ್ದಾರೆ. == ವಾಸ್ತುಶಿಲ್ಪ == ಕಮಲ ಬಸದಿಯ ಮಧ್ಯದ ಛಾವಣಿಯು ಗುಮ್ಮಟದಿಂದ ವಿಸ್ತರಿಸಿರುವ ಕಮಲದ ಕೆತ್ತನೆಗಳನ್ನು ಒಳಗೊಂಡಿದೆ. ಆದ್ದರಿಂದ ಕಮಲ ಬಸದಿ ಎಂದು ಪ್ರಸಿದ್ಧವಾಗಿದೆ. ಕಮಲವು 72 ದಳಗಳನ್ನು ಹೊಂದಿದ್ದು ಭೂತ, ವರ್ತಮಾನ ಮತ್ತು ಭವಿಷ್ಯದ 24 ತೀರ್ಥಂಕರರನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ದೇವಾಲಯದ ಗೋಡೆಗಳಲ್ಲಿ ಸಂಕೀರ್ಣವಾದ ವಿನ್ಯಾಸಗಳು, ಗಡಿಗಳು ಮತ್ತು ಶಿಲ್ಪಗಳನ್ನು ಕೆತ್ತಲಾಗಿದೆ. ದೇವಾಲಯದ ಗೋಡೆಯು ಕಂಬಗಳಿಂದ ಕೂಡಿದೆ ಮತ್ತು ಪ್ರತಿ ಆವರಣದ ಕೊನೆಯಲ್ಲಿ ನಾಗರ ಕೆತ್ತನೆ ಇದೆ. ಸ್ತಂಭಗಳನ್ನು ಅಲಂಕಾರಯುತವಾಗಿ ಕೆತ್ತಲಾಗಿದೆ ಮತ್ತು ಅಂದವಾಗಿ ಪಾಲಿಶ್ ಮಾಡಲಾಗಿದೆ. ದೇವಾಲಯವು ಶ್ರೀಮಂತ ಕೆತ್ತನೆಯ ದ್ವಾರವನ್ನು ಹೊಂದಿದೆ. ತೀರ್ಥಂಕರರ ವಿಗ್ರಹಗಳನ್ನು ಹೊಂದಿರುವ ಒಟ್ಟು ಐದು ಸಣ್ಣ ಕಿಂಡಿಗಳಿವೆ; ಈ ಕಿಂಡಿಗಳ ನಡುವೆ ನಾಲ್ಕು ಯಕ್ಷ ಮತ್ತು ಯಕ್ಷಿಯು ಸಣ್ಣ ಮೇಲಾವರಣದ ಕೆಳಗೆ ನಿಂತಿರುವ ಭಂಗಿಯಲ್ಲಿರುತ್ತಾರೆ. ಗರ್ಭಗೃಹದ ಒಳಗಿನ ಕಂಬಗಳು ಚೌಕಾಕಾರ ಮತ್ತು ಬೃಹತ್ ಗಾತ್ರದಲ್ಲಿವೆ. ಬಾಗಿಲಿನ ಪ್ರತಿ ಬದಿಯಲ್ಲಿ, ಜೈನ ದೇವತೆಗಳ ಕೆತ್ತನೆಗಳಿವೆ. ದೇವಾಲಯದ ಮುಖಮಂಟಪವನ್ನು ವಾಸ್ತುಶಿಲ್ಪದ ಮೇರುಕೃತಿ ಎಂದು ಪರಿಗಣಿಸಲಾಗಿದೆ. ದೇವಾಲಯದ ಮೂಲದೇವತೆ ನೇಮಿನಾಥನ ಕಪ್ಪು ಬಣ್ಣದ ವಿಗ್ರಹವಾಗಿದೆ. ದೇವಾಲಯದಲ್ಲಿ ರಿಷಭನಾಥನ ಪದ್ಮಾಸನ ಭಂಗಿ, ಸುಮತಿನಾಥ ಕಾಯೋತ್ಸರ್ಗ ಭಂಗಿ ಮತ್ತು ಏಳು ಹೆಡೆಯ ಸರ್ಪದ ಮೇಲಿರುವ ಪಾರ್ಶ್ವನಾಥನ ವಿಗ್ರಹಗಳಿವೆ. ಒಂಬತ್ತು ತೀರ್ಥಂಕರರನ್ನು ಪ್ರತಿನಿಧಿಸುವ ನವಗ್ರಹದ ಏಕಶಿಲಾ ವಿಗ್ರಹವನ್ನು ಸಹ ದೇವಾಲಯ ಒಳಗೊಂಡಿದೆ. ಚಿಕ್ಕಿ ಬಸದಿ ಹಾಗೂ ಅರ್ಚಕರ ಮನೆ ಕಮಲ ಬಸದಿಯ ಸಮೀಪದಲ್ಲಿದೆ. == ಜನಪ್ರಿಯ ಸಂಸ್ಕೃತಿಯಲ್ಲಿ == ಕಮಲ ಬಸದಿಯ 816 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ 23ನೇ ಡಿಸೆಂಬರ್ 2020 ವಿಶೇಷ ಅಂಚೆ ಕವರ್ ಅನ್ನು ಬಿಡುಗಡೆ ಮಾಡಲಾಗಿದೆ. == ಚಿತ್ರಗಳು == === ಉಲ್ಲೇಖಗಳು === == ಬಾಹ್ಯ ಕೊಂಡಿಗಳು == (1875). . . 10. : . , (1875). . . 4. . , ( 1884). : . . . 21. : . , (1884). . . . 17. : . , . (2018). & . . 1. : . 978-1136176418. , . . . (2009). . : . 9788174780621. , (2013). : & . : . 9788174369031. , (11 2015). " ". . 18 2021. , . (7 2013). " : ". . 20 2021. "' 816, ". . 27 2020. 20 2021. ,